ಬ್ರಹ್ಮಚಾರಿ ಚಂದ್ರ ಮೋಹನ್ ಬರೆದು ನಿರ್ದೇಶಿಸಿದ 2019 ರ ಕನ್ನಡ ಹಾಸ್ಯ ಚಲನಚಿತ್ರವಾಗಿದೆ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಸತೀಶ್ ನೀನಾಸಂ ಮತ್ತು ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರದಲ್ಲಿ ಅಕ್ಷತಾ ಶ್ರೀನಿವಾಸ್, ಶಿವರಾಜ್ ಕೆ ಆರ್ ಪೇಟೆ, ಅಶೋಕ್, ಆಕಾಂಕ್ಷಾ, ಅಚ್ಯುತ್ ಕುಮಾರ್, ಪದ್ಮಜಾ ರಾವ್ ಮತ್ತು ಎಚ್ ಜಿ ದತ್ತಾತ್ರೇಯ ಇದ್ದಾರೆ . ಚಿತ್ರಕ್ಕೆ ಸಂಗೀತವನ್ನು ಧರ್ಮ ವಿಶ್ ಕೊಟ್ಟಿದ್ದಾರೆ ಛಾಯಾಗ್ರಹಣ ರವಿ.ವಿ. ಅವರದ್ದು. == ಪಾತ್ರವರ್ಗ == ಸತೀಶ್ ನೀನಾಸಂ ಅದಿತಿ ಪ್ರಭುದೇವ ಅಕ್ಷತಾ ಶ್ರೀನಿವಾಸ್ ಶಿವರಾಜ್ ಕೆ.ಆರ್.ಪೇಟೆ ಅಶೋಕ್ ಆಕಾಂಕ್ಷಾ ಅಚ್ಯುತ್ ಕುಮಾರ್ ಪದ್ಮಜಾ ರಾವ್ ಎಚ್ ಜಿ ದತ್ತಾತ್ರೇಯ == ನಿರ್ಮಾಣ == ಚಲನಚಿತ್ರವನ್ನು 14 ಏಪ್ರಿಲ್ 2019 ರಂದು ಘೋಷಿಸಲಾಯಿತು. ಸತೀಶ್ ನೀನಾಸಂ ಮುಖ್ಯ ನಾಯಕ ಎಂದು ಚಿತ್ರತಂಡ ಘೋಷಿಸಿತ್ತು. ನಂತರ ಅದಿತಿ ಪ್ರಭುದೇವ ನಾಯಕಿಯಾಗಿ ಮಂಡಳಿಯಲ್ಲಿದ್ದರು. ಚಿತ್ರದ ಪ್ರಮುಖ ಪಾತ್ರಕ್ಕಾಗಿ ಎಚ್‌ಜಿ ದತ್ತಾತ್ರೇಯ ಅವರನ್ನು ಸಂಪರ್ಕಿಸಲಾಯಿತು. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಕ್ಷತಾ ಶ್ರೀನಿವಾಸ್ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಘೋಷಿಸಿತು. ಬೆಂಗಳೂರು ಮತ್ತು ಶ್ರೀರಂಗಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. == ಹಿನ್ನೆಲೆಸಂಗೀತ == ಚಿತ್ರದ ಹಿನ್ನೆಲೆ ಸಂಗೀತವನ್ನು ಧರ್ಮ ವಿಶ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಆನಂದ ಆಡಿಯೋ ಪಡೆದುಕೊಂಡಿದೆ. == ಬಿಡುಗಡೆ == ಚಿತ್ರವು 29 ನವೆಂಬರ್ 2019 ರಂದು ಬಿಡುಗಡೆಯಾಯಿತು. ಚಲನಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು, ವಾಣಿಜ್ಯಿಕವಾಗಿ ವಿಫಲವಾಯಿತು. ಟೈಮ್ಸ್ ಆಫ್ ಇಂಡಿಯಾ 3.5/5 ನೀಡಿತು ಮತ್ತು ಬರೆಯಿತು "ಬ್ರಹ್ಮಚಾರಿ ಒಂದು ಗಂಭೀರ ವಿಷಯದೊಂದಿಗೆ ವ್ಯವಹರಿಸುತ್ತಾನೆ, ಆದರೆ ಎಂದಿಗೂ ಉಪದೇಶಕ್ಕಿಳಿಯುವುದಿಲ್ಲ. ವಾಸ್ತವವಾಗಿ, ನಾಯಕನ ಕಾರ್ಯಕ್ಷಮತೆಯ ಸಮಸ್ಯೆಗಳು ದೋಷಗಳ ಹುಚ್ಚು ಹಾಸ್ಯಕ್ಕೆ ವೇಗವರ್ಧಕವಾಗಿದೆ. ನೀವು ಹಾಸ್ಯವನ್ನು ಇಷ್ಟಪಟ್ಡುತ್ತಿದ್ದರೆ, ಇದು ನಿಮಗೆ ಮನರಂಜನೆಯನ್ನು ನೀಡಬಲ್ಲುದು." ಬೆಂಗಳೂರು ಮಿರರ್ 3/5 ನೀಡಿ " ಕಥೆಯನ್ನು ಚೆನ್ನಾಗಿ ಪ್ರಸ್ತುತಪಡಿಸಲಾಗಿದೆ , ಮನರಂಜನೆಯ ಅಂಶಕ್ಕೆ ಕೊರತೆಯಿಲ್ಲ." ಎಂದು ಬರೆಯಿತು. == ಉಲ್ಲೇಖಗಳು ==